ಉತ್ತರ ಪ್ರದೇಶದ (Uttar Pradesh) ಕಾಸ್ಪುರ ಹಾಗೂ ಅಲೀಗಢ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅಲ್ವಿದಾ ಹಾಗೂ ಈದ್- ಉಲ್-ಫಿತ್ (Eid namaz) ಅಂಗವಾಗಿ ನಮಾಜ್ ಮಾಡಿದ 1,700 ಮಂದಿ ಅಪರಿಚಿತರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಷೇಧಾಜ್ಞೆ ನಡುವೆಯೂ ಏಪ್ರಿಲ್ 22ರಂದು ನಗರದ ಬೆನಜಬಾರ್ನಲ್ಲಿರುವ ಜಜ್ಮೌ ಈದ್ಗಾ, ಬಾಬುಪುರ್ವಾ ಈದ್ಗಾ ಮತ್ತು ಬದಿ ಈದ್ಗಾದ ಹೊರಭಾಗದ ರಸ್ತೆಯಲ್ಲಿ ನಮಾಜ್ ಮಾಡಲಾಗಿತ್ತು. ಹಾಗಾಗಿ ಜಜ್ಮೌ ಪೊಲೀಸ್ ಠಾಣೆಯಲ್ಲಿ 200, ಬೇಗಂಪುರವಾ ಪೊಲೀಸ್ ಠಾಣೆಯಲ್ಲಿ 40 ರಿಂದ 50 ಹಾಗೂ ಬೆನಜ್ಹಬರ್ ಪೊಲೀಸ್ ಠಾಣೆಯಲ್ಲಿ ಸುಮಾರು 1,500 ಮಂದಿ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.