ಸಚಿವ ಸಂಪುಟಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರ ಸೇರ್ಪಡೆ ತಪ್ಪಿಸಿರಿ ಎಂದು ರಾಜ್ಯಪಾಲರಿಗೆ ರೈತರ ನಿಯೋಗ ಮನವಿ ಮಾಡಿದೆ. ರಾಜ್ಯ ರೈತ ಸಂಘಗಳ ಒಕ್ಕೂಟದ ಪದಾಧಿಕಾರಿಗಳಾದ ಕುರುಬೂರು ಶಾಂತಕುಮಾರ್, ವಿ.ಆರ್.ನಾರಾಯಣ ರೆಡ್ಡಿ, ಪಟೇಲ್ ಪ್ರಸನ್ನಕುಮಾರ್ ಮತ್ತಿತರರನ್ನು ಒಳಗೊಂಡ ನಿಯೋಗ ರಾಜಭವನದಲ್ಲಿ ರಾಜ್ಯಪಾಲರಿಗೆ ಇಂದು ಭೇಟಿಯಾಗಿ ಮನವಿ ಸಲ್ಲಿಸಿತು. ಕಬ್ಬು ಬೆಳೆಗಾರರಿಂದ ವೋಟು ಪಡೆದು ಗೆದ್ದವರು ಸರ್ಕಾರದ ಭಾಗವಾದ ನಂತರ ರೈತರ ಹಿತರಕ್ಷಿಸುವ ಕೆಲಸ ಮಾಡಬೇಕು.