ವೀಕೆಂಡ್ನಲ್ಲಿ ಪಾಂಡಿಚೆರ್ರಿಗೆ ಟ್ರಿಪ್ ಹೋಗೋಕೆ ಪ್ಲ್ಯಾನ್ ಮಾಡಿದ್ದೀರಾ..? ಅದರಲ್ಲೂ, ಮದ್ಯ ಸೇವನೆ ಮಾಡೋ ಆಸೆ ಇದ್ಯಾ..? ನಿಮ್ಮ ಉತ್ತರ ಹೌದಾದರೆ ನಿಮಗಿದೋ ಭರ್ಜರಿ ಆಫರ್. ಕೇಂದ್ರಾಡಳಿತ ಪ್ರದೇಶ ಪುದುಚೆರ್ರಿಯಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ, ವಿಶೇಷವಾಗಿ ಮದ್ಯ ಸೇವನೆಯಲ್ಲಿ ಆಸಕ್ತಿ ಹೊಂದಿರುವವರನ್ನು ಕರೆತರಲು ಬಿಯರ್ ಬಸ್ ಅನ್ನು ಪರಿಚಯಿಸಲು ಸಿದ್ಧವಾಗಿದೆ.
ಹೌದು, ಪುದುಚೇರಿಯು ಹಾಪ್ ಆನ್ ಬ್ರೀವರಿ ಟೂರ್ ಬಸ್ ಅರ್ಥಾತ್ ಬಿಯರ್ ಬಸ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇದು ವಾರಾಂತ್ಯದಲ್ಲಿ ಚೆನ್ನೈನಿಂದ ಪುದುಚೆರ್ರಿಗೆ ಒಂದು ದಿನದ ಪ್ಯಾಕೇಜ್ ರೌಂಡ್ ಟ್ರಿಪ್ ಆಗಿದೆ. ಆದರೆ, ಈ ಸೇವೆ ಸದ್ಯ ಬೆಂಗಳೂರಿನಿಂದ ಇಲ್ಲ ಎಂದು ತಿಳಿದುಬಂದಿದೆ. ವಾರಾಂತ್ಯದಲ್ಲಿ ಚೆನ್ನೈನಿಂದ ಪುದುಚೇರಿಗೆ ಒಂದು ದಿನದ ಪ್ಯಾಕೇಜ್ ರೌಂಡ್ ಟ್ರಿಪ್ ಆಗಿದೆ. ಕ್ಯಾಟಮಾರನ್ ಬ್ರೀವಿಂಗ್ ಕಂಪನಿಯು ಪ್ರಾರಂಭಿಸಿದ ಈ ಪ್ರವಾಸವು ಏಪ್ರಿಲ್ 22, ಶನಿವಾರದಂದು ಚಾಲನೆ ನೀಡಿದೆ.