ಬೆಂಗಳೂರಿನ ಜಕ್ಕೂರಿನಿಂದ ಮುಳಬಾಗಿಲಿಗೆ ಬರಬೇಕಾದ್ರೆ ದೊಡ್ಡ ಹದ್ದು ಬಂದು ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆಯಿತು. ಹೆಲಿಕಾಪ್ಟರ್ ನ ಗ್ಲಾಸ್ ಎಲ್ಲಾ ಒಡೆದು ಹೋಗಿದೆ. ಬಹಳ ದೊಡ್ಡ ಅನಾಹುತ ಆಗಬೇಕಿತ್ತು. ರಾಜ್ಯದ ಜನರ ಪ್ರೀತಿ ವಿಶ್ವಾಸ ಆರೈಕೆಯಿಂದ ಇಂದು ಜೀವಂತವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯದ ಜನರ ಪ್ರೀತಿ ವಿಶ್ವಾಸದಿಂದ ಇಂದು ಜೀವಂತವಾಗಿದ್ದೇನೆ:
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ ಪರ ನಗರದಲ್ಲಿ ಬೃಹತ್ ರೋಡ್ ಶೋ ಮೂಲಕ ಡಿಕೆ ಶಿವಕುಮಾರ್ ಮತಯಾಚನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಮುಳಬಾಗಿಲಿಗೆ ಹೆಲಿಕಾಪ್ಟರ್ ಮೂಲಕ ಬರುತ್ತಿದ್ದೆ. 7-8 ನಿಮಿಷ ಹೆಲಿಕಾಪ್ಟರ್ ನಲ್ಲಿ ಪ್ರಯಾಣವೂ ಮಾಡಿದ್ದೆ. ಆದರೆ ಅಷ್ಟರಲ್ಲಿ ಹೆಲಿಕಾಪ್ಟರ್ ಗೆ ದೊಡ್ಡದಾದು ಹದ್ದು ಡಿಕ್ಕಿ ಹೊಡೆದಿದೆ. ಆಗ ಹೆಲಿಕಾಪ್ಟರ್ ನ ಗ್ಲಾಸ್ ಎಲ್ಲಾ ಒಡೆದು ಹೋಯಿತು.