ಜಮೀನಿನಲ್ಲಿ ಬೋರ್ ಮೋಟಾರ್ ಆನ್ ಮಾಡಲು ಹೋಗಿ ವಿದ್ಯುತ್ ಸ್ಪರ್ಶಿಸಿ 38 ವರ್ಷದ ವ್ಯಕ್ತಿವೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಂಬೋಳ್ಳಿ ಗ್ರಾಮದಲ್ಲಿ ತಡ ರಾತ್ರಿ ಸಂಭವಿಸಿದೆ. ತಿಪ್ಪಣ್ಣ ದುಸಗೆಕರ ಎಂಬುವವನೆ ಮೃತ ಪಟ್ಟ ದುರ್ದೈವಿ.ಮಂಗಳವಾರ ತಡ ರಾತ್ರಿ ತಿಪ್ಪಣ್ಣ ದುಸಗೆಕರ ಎಂಬುವವನು ವಾಸುದೇವ ಕಲ್ಲಾಪುರ ಎಂಬುವವರ ಜಮೀನಿನಲ್ಲಿ ಬೋರ್ ಮೋಟರ್ ಆನ್ ಮಾಡಲು ಹೋಗಿದ್ದಾನೆ.
ಬೋರ್ ಮೋಟರ್ ಆನ್ ಆಗದ ಕಾರಣಕ್ಕೆ ಕರೆಂಟ್ ಕೇಬಲ್ ಅನ್ನ ರಿಪೇರಿ ಮಾಡಲು ಮುಂದಾದಾಗ ಕರೆಂಟ್ ಶಾಕ್ ಹೊಡದಿದೆ.ಕರೆಂಟ್ ಶಾಕ್ ಪರಿಣಾಮ ಸ್ಥಳದಲ್ಲಿಯೇ ತಿಪ್ಪಣ್ಣ ಅಸುನೀಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಕೆ.ಇ.ಬಿ ಸಿಬ್ಬಂದಿ ಪರಿಶೀಲನೆ ನಡೆಸಿ ಮೃತ ವ್ಯಕ್ತಿಗೆ ಪರಿಹಾರ ನೀಡುವ ಭರವಸೆಯನ್ನ ನೀಡಿದ್ದಾರೆ.ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.