ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಬಿಜೆಪಿಯನ್ನು (BJP) ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೂಡಿಗೆರೆ (Mudigere) ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ಕಿಡಿಕಾರಿದರು.
ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮಾಧ್ಯದೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಕೈತಪ್ಪುವಂತೆ ಮಾಡಿರೋದ ಹಿಂದೆ ಸಿ.ಟಿ. ರವಿ ಕೈವಾಡ ಇದೆ. ಬಿಜೆಪಿ ಸಿಟಿ ರವಿಯನ್ನು ನಂಬಿಕೊಂಡು ಹೊದರೆ ಮುಂದಿನ ದಿನಗಳಲ್ಲಿ ಅನುಭವಿಸುತ್ತದೆ. ಸಿಟಿ ರವಿ ಓದ್ಕೊಂಡು ಬಂದಿಲ್ಲ. ಸಂಘ ಪರಿವಾರದ ಜೊತೆ ಇದ್ದು ಮಾತನಾಡೊದನ್ನ ಕಲಿತುಕೊಂಡಿದ್ದಾನೆ ಎಂದು ವಾಗ್ದಾಳಿ ನಡೆಸಿದರು.