ಚೆಪಾಕ್ನಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಒತ್ತಡ ಮೆಟ್ಟಿನಿಂತ ಚೆನ್ನೈ ಸೂಪರ್ ಕಿಂಗ್ಸ್ ತಂಡ 12 ರನ್ಗಳ ಅಂತರದಲ್ಲಿ ಲಖನೌ ಸೂಪರ್ ಜಯಂಟ್ಸ್ಗೆ ಸೋಲುಣಿಸುವ ಮೂಲಕ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಗೆಲ್ಲಲು 218 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಕೆ.ಎಲ್ ರಾಹುಲ್ ಸಾರಥ್ಯದ ಎಲ್ಎಸ್ಜಿ ತಂಡ ಕೊನೇ ಓವರ್ವರೆಗೂ ಹೋರಾಟ ಹಿಡಿದಿಟ್ಟಿತು. ಕೈಲ್ ಮೇಯರ್ಸ್ (22 ಎಸೆತಗಳಲ್ಲಿ 53 ರನ್) ಒದಗಿಸಿಕೊಟ್ಟ ಸ್ಪೋಟಕ ಆರಂಭದ ಲಾಭ ಪಡೆದು ಜಯ ದಕ್ಕಿಸಿಕೊಳ್ಳಲು ಪೈಪೋಟಿ ನಡೆಸಿತು. ಇನಿಂಗ್ಸ್ ಮಧ್ಯದಲ್ಲಿ ಮಾರ್ಕಸ್ ಸ್ಟೊಯ್ನಿಸ್ (21), ನಿಕೋಲಸ್ ಪೂರನ್ (32) ಮತ್ತು ಆಯುಶ್ ಬದೋನಿ (23) ಬಿರುಸಿನ ಬ್ಯಾಟಿಂಗ್ ನಡೆಸಿ ಹೋರಾಡಿದರು.