ಬೆಂಗಳೂರಿನ ಸಿದ್ದಾಪುರದಲ್ಲಿ ಇಬ್ಬರು ಯುವಕರು ಕಿಡ್ನ್ಯಾಪ್ ಆಗಿರುವ ಘಟನೆ ಜರುಗಿದೆ. ಬಾರ್ನಲ್ಲಿ ಎಣ್ಣೆ ಹೊಡೆಯುವಾಗ ಮಾತಿಗೆ ಮಾತು ಬೆಳೆದು ರೌಡಿಶೀಟರ್ ಸಹಚರರು ಹಾಗೂ ಸಿದ್ದಾಪುರ ಯುವಕರ ನಡುವೆ ಗಲಾಟೆಯಾದ ಹಿನ್ನೆಲೆ ಕಿಡ್ನ್ಯಾಪ್ ಮಾಡಲಾಗಿದೆ. ಕಳೆದ 9 ನೇ ತಾರೀಕಿನಂದು ಬಾಲಕ ಬಾರ್ನಲ್ಲಿದ್ದಾಗ ಅಲ್ಲೇ ಕುಡಿಯಲು ಬಂದಿದ್ದ ಸಿದ್ಧಾಪುರ ಯುವಕರ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಬಳಿಕ ಮನೋಜ್ ಹಾಗೂ ಬಾಲಕನನ್ನ ಕಿಡ್ನಾಪ್ ಮಾಡಿ ಸಿದ್ಧಾಪುರಕ್ಕೆ ಕರೆದೊಯ್ದಿದ್ದರು. ವಿಚಾರ ತಿಳಿದ ರೌಡಿಶೀಟರ್ ಹ್ಯಾಂಡ್ರೋ ಹರೀಶ್ ಎಂಬಾತ ತನ್ನ 15 ಸಹಚರರ ಜೊತೆ ಬೈಕ್ನಲ್ಲಿ ಸಿನಿಮಾ ಸ್ಟೈಲ್ನಲ್ಲಿ ಚೇಸ್ ಮಾಡಿ ಸಿದ್ದಾಪುರ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿದ್ಧಾಪುರ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸಿದ್ದಾಪುರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ಸಂಬಂಧ 6 ಜನ ಯುವಕರು, 4 ಮಂದಿ ಕಾನೂನು ಸಂಘರ್ಷಕ್ಕೊಳಗಾದವರನ್ನ ಬಂಧಿಸಲಾಗಿದೆ.