ಮನೆಯಲ್ಲಿ ಮಲಗಿದ್ದ ನವಜಾತ ಹೆಣ್ಣು ಮಗುವನ್ನ ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಕಳ್ಳತನ ಮಾಡಿದ ಆರೋಪಿತೆಯ ಹಿಸ್ಟರಿಯೇ ಭಯಾನಕವಾಗಿದೆ. ಹೌದು, ಈಕೆ ಕಳ್ಳತನ ಮಾಡಲು ಮನೆಗೆ ಎಂಟ್ರಿ ಕೊಡೊ ರೀತಿ ಕೇಳಿದ್ರೆ ಎಂಥವರು ಶಾಕ್ ಅಗ್ತಾರೆ. ಇಂತಹ ಖತರ್ನಾಕ್ ಕಳ್ಳಿಯ ಹೆಸರು ನಂದಿನಿ @ ಅಯೇಷಾ ಅಂತ.
ಯಾರಾದ್ರೂ ಮನೆ ಬಾಗಿಲಿಗೆ ಡೋನೆಷನ್ ಕೇಳ್ಕೊಂಡು ಬಂದ್ರೆ ಎಚ್ಚರ ವಹಿಸೋದು ಅಗತ್ಯವಾಗಿದೆ. ಬಂಧಿತ ಆರೋಪಿತೆ ಈ ಹಿಂದೆ ಸಣ್ಣ ಪುಟ್ಟ ಪ್ರಕರಣಗಳಲ್ಲಿ ಈಕೆ ಪೊಲೀಸರ ಅತಿಥಿಯಾಗಿದ್ದಳು. ಯಾವುದೋ ಒಂದು ಸಂಸ್ಥೆಯ ಬ್ರೋಷರ್ ಹಿಡ್ಕೊಂಡು ಮನೆಗೆ ಬರ್ತಾಳೆ, ಈ ಸಂಸ್ಥೆಗೆ ಧನ ಸಹಾಯ ಮಾಡಿ ಅಂತ ಪರಿಪರಿಯಾಗಿ ಬೇಡ್ಕೋಳ್ತಾಳೆ. ನೀವು ಹಣ ತರಲು ಒಳಗೆ ಹೋದ್ರೆ ನಿಮ್ಮ ಮನೆಯಲ್ಲಿ ವಸ್ತು ಅಥವಾ ಮಗು ಕದಿತಾಳೆ. ಬುರ್ಖಾ ಹಾಕಿಕೊಂಡೆ ಮನೆಗೆ ಎಂಟ್ರಿ ಕೊಡ್ತಾಳೆ ಈ ಐನಾತಿ ಕಳ್ಳಿ. ಸಿಸಿಟಿವಿಯಲ್ಲೂ ಈಕೆ ಯಾರು ಅನ್ನೋದೇ ಗೊತ್ತಾಗೋದಿಲ್ಲ. ಅಂತಹ ಪ್ಲಾನ್ ಮಾಡಿಕೊಂಡೇ ಬರ್ತಾಳೆ ಈ ಚಾಲಾಕಿ ಕಳ್ಳಿ.