ಮನೆಯಲ್ಲಿ ಅಪ್ಪಿ ತಪ್ಪಿ ಒಂದು ಹಾವು ಕಾಣಿಸಿಕೊಂಡರೆ ಹೌಹಾರಿಬಿಡ್ತೀವಿ. ಹಾವನ್ನ ಹಿಡಿದ ನಂತರವೂ ಅದು ಕಾಣಿಸಿಕೊಂಡ ಜಾಗದಲ್ಲಿ ಓಡಾಡಲು ಭಯಪಡೋರೂ ಇದ್ದಾರೆ. ಆದ್ರೆ ಒಂದೇ ಮನೆಯಲ್ಲಿ ಬೇರೆ ಬೇರೆ ಕಡೆ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡ್ರೆ ನಿಮ್ಮ ರಿಯಾಕ್ಷನ್ ಹೇಗಿರುತ್ತೆ? ಇಂತಹದ್ದೇ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಟೆಕ್ಸಾಸ್ನ ಜೋನ್ಸ್ ಕೌಂಟಿಯ ಮನೆಯೊಂದರಲ್ಲಿ ಟಾಯ್ಲೆಟ್ ಕಮೋಡ್ನಲ್ಲಿ ರ್ಯಾಟಲ್ ಸ್ನೇಕ್ ಜಾತಿಯ ಹಾವೊಂದು ಕಾಣಿಸಿಕೊಂಡಿತ್ತು. ಕೂಡಲೇ ಮನೆಯವರು ಬಿಗ್ ಕಂಟ್ರಿ ಸ್ನೇಕ್ ರಿಮೂವಲ್ ಎಂಬ ಕೀಟ ನಿಯಂತ್ರಕ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ರು. ನಂತರ ಉರಗ ತಜ್ಞರು ಬಂದು ಆ ಹಾವನ್ನು ಹಿಡಿದಿದ್ದೂ ಆಯ್ತು. ಆದ್ರೆ ಆಮೇಲೆ ಗೊತ್ತಿಗಿದ್ದು ಆ ಮನೆಯಲ್ಲಿ ಇನ್ನೂ 23 ಹಾವುಗಳಿದ್ದವು ಅನ್ನೋದು.