ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜದ ವಿರೋಧಿ ಎಂದು ಬಿಂಬಿಸಲು ಹೊರಟವರಿಗೆ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.2 A ಮೀಸಲಾತಿಗೆ ಆಗ್ರಹಿಸಿ ಸಿಎಂ ಸ್ವ ಕ್ಷೇತ್ರದಲ್ಲಿಯೇ ಹೋರಾಟ ಮಾಡಿ ಸಿಎಂ ವಿರುದ್ದ ಟೀಕೆಗಳ ಸುರಿಮಳೆಯನ್ನೇ ಸುರಿಸಲಾಗಿತ್ತು. ಮೀಸಲಾತಿ ವಿಚಾರದಲ್ಲಿ ತಮ್ಮ ವಿರುದ್ಧ ಬಂದ ಎಲ್ಲಾ ಟೀಕೆಗಳಿಗೆ ಸಿಎಂ ಇಂದು ಉತ್ತರ ನೀಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2 A ಮೀಸಲಾತಿ ನೀಡಲು ಆಗ್ರಹಿಸಿ ಬಹಳ ದಿನಗಳಿಂದ ದೊಡ್ಡ ಹೋರಾಟವೇ ನಡೆದಿತ್ತು. ಯಡಿಯೂರಪ್ಪ ಬಳಿಕ ರಾಜ್ಯದ ಅಧಿಕಾರರದ ಗದ್ದುಗೆ ಹಿಡಿದ ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ 2 A ಮೀಸಲಾತಿ ಹೋರಾಟದಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ರು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ಪಡೆ ಕಟ್ಟಿಕೊಂಡು ಶಿಗ್ಗಾವಿಯಲ್ಲೇ ಎರಡು ಬಾರಿ ಪ್ರತಿಭಟನೆ ನಡೆಸಿದ್ರು.2 A ಮೀಸಲಾತಿ ಕೊಡಲಿಲ್ಲ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಶಾಸಕ ಯತ್ನಾಳ, ವಿಜಯಾನಂದ ಕಾಶೆಪ್ಪನವರ ಟೀಕೆ ಮಾಡಿಕೊಂಡೇ ಬಂದಿದ್ರು. ಇದರಿಂದ ಸಹಜವಾಗೇ ಶಿಗ್ಗಾವಿಯಲ್ಲಿರುವ ಪಂಚಮಸಾಲಿ ಸಮಾಜದ ಜನರ ಮುಂದೆಯೂ ಸಿಎಂ ಬೊಮ್ಮಾಯಿ ಮೀಸಲಾತಿ ನೀಡದೇ ಸತಾಯಿಸುತ್ತಿದ್ದಾರೆ ಎಂದು ಬಿಂಬಿಸೋ ಕೆಲಸ ಕೂಡಾ ನಡೆಯಿತು. ಈ ಎಲ್ಲ ಟೀಕೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉತ್ತರ ನೀಡಿದರು..