ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಅಪರಿಚಿತ ವಂಚಕನ ಬಲೆಗೆ ಬಿದ್ದ ಯುವತಿಯೊಬ್ಬರು 3.18 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಈ ಕುರಿತು ಮೋಸ ಹೋದ 35 ವರ್ಷದ ಯುವತಿ ವೈಟ್ಫೀಲ್ಡ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿತ್ಯ ಹೆಸರಿನ ವಂಚಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ದೂರುದಾರೆಗೆ ಕೆಲ ತಿಂಗಳ ಹಿಂದೆ ಡೇಟಿಂಗ್ ಆ್ಯಪ್ನಲ್ಲಿಆದಿತ್ಯ ಎಂಬಾತ ಪರಿಚಯವಾಗಿದ್ದ. ತಾನು ಲಂಡನ್ನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದ. ಬಳಿಕ ಇಂಟರ್ನೆಟ್ ವಾಟ್ಸ್ಆ್ಯಪ್ ಕಾಲ್ನಲ್ಲಿ ಸಂಪರ್ಕ ಸಾಧಿಸಿದ್ದು, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.