ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ.ಬಿಜೆಪಿಯ ನಡೆಯನ್ನು ಕಾಯುತ್ತಿದ್ದ ಆಯನೂರು ಮಂಜುನಾಥ್ ಅಂತಿಮವಾಗಿ ತಮ್ಮ ವಿಧಾನ ಪರಿಷತ್ ಸದಸ್ಯಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಸಂಬಂಧ ಇವತ್ತು ಬೆಳ್ಳಂಬೆಳಗ್ಗ ತುರ್ತು ಪತ್ರಿಕಾಗೋಷ್ಟಿ ಕರೆದಿದ್ದ ಅವರು, ಇವತ್ತು ಹುಬ್ಬಳ್ಳಿಗೆ ತೆರಳಿ ಅಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ಧಾರೆ.
ಕೆ.ಎಸ್.ಈಶ್ವರಪ್ಪ ಹಾಗೂ ಕೆಇ ಕಾಂತೇಶ್ ವಿರುದ್ಧದ ಸ್ಪರ್ಧೆಗೆ ಅಣಿಯಾದ ಆಯನೂರು ಮಂಜುನಾಥ್ ಕೊನೆಕ್ಷಣದವರೆಗೂ ಬಿಜೆಪಿ ಟಿಕೆಟ್ ಯಾರಿಗೆ ಘೋಷಣೆಯಾಗಲಿದೆ ಎಂಬುದನ್ನ ಕಾದು ನೋಡಿದ್ಧಾರೆ. ಆದರೆ ಹೈಕಮಾಂಡ್ ಇದುವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡದೇ ಕುತೂಹಲದಲ್ಲಿ ಇರಿಸಿದೆ. ಹೀಗಾಗಿ ಅಂತಿಮವಾಗಿ ಚುನಾವಣಾ ಅಖಾಡಕ್ಕೆ ಎಂಟ್ರಿ ತೆಗೆದುಕೊಳ್ಳಲು ಮುಂದಾಗಿರುವ ಆಯನೂರು ಮಂಜುನಾಥ್ ಇವತ್ತು ಮಧ್ಯಾಹ್ನ ಸಭಾಪತಿ ಬಸವರಾಜ ಹೊರಟ್ಟಿ ಯವರನ್ನ ಭೇಟಿಯಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.