ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವ ಬಿಜೆಪಿ ಪಕ್ಷದವರು ಜನರನ್ನು ಸೆಳೆಯಲು ಹಾಗೂ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆ ಕಾಣಲೆಂದು ಮಹಿಳೆಯರಿಗೆ ಒಂದೇ ತರಹದ ಸೀರೆ ಹಂಚಿ ಎಲ್ಲರೂ ಸೀರೆ ಉಟ್ಟುಕೊಂಡು ಬರಬೇಕು ಎಂದು ಆಯಾ ವಾರ್ಡಿನಲ್ಲಿ 35ಸೀರೆ ಹಂಚಿದ್ದಾರೆ ಎಂದು ಮಹಿಳೆಯರಿಂದ ಮಾತು ಕೇಳಿ ಬಂತು. ಅಲ್ಲದೇ ಮೆರವಣಿಗೆ ನಡೆಯುವ ವೇಳೆ ಪುರುಷರಿಗೆ ಪೇಟ ಹಂಚುತ್ತಿರುವದು ಕಂಡು ಬಂದಿದ್ದು ಸಾಮಾನ್ಯವಾಗಿತ್ತು.ಸಂಕಲ್ಪ ಯಾತ್ರೆ ಪಕ್ಕದಲ್ಲೇ ವಾಹನ ತೆಗೆದುಕೊಂಡು ಬಂದು ಸೇರಿರುವ ಜನರಿಗೆ ಪೇಟ ನೀಡುತ್ತಾ ಹೋಗುತ್ತಿರುವರು, ಜನರು ಯಾತ್ರೆಯನ್ನು ಬಿಟ್ಟು ಪೇಟಕ್ಕಾಗಿ ಮುಗಿಬಿದ್ದನ್ನು ಕಾಣಬಹುದು.
