ಎಚ್ಐವಿ ಪೀಡಿತ ಒಂದೇ ಒಂದು ಮಹಿಳಾ ಖೈದಿಯಿಂದ ಉತ್ತರಾಖಂಡದ ಹಲ್ದ್ವಾನಿ ಜೈಲಿನಲ್ಲಿ ಬರೋಬ್ಬರಿ 44 ಜೈಲು ಖೈದಿಗಳಿಗೆ ಏಡ್ಸ್ ಸೋಂಕು ಅಂಟಿರುವ ಬಗ್ಗೆ ವರದಿಯಾಗಿದೆ. ಜೈಲಿನಲ್ಲಿ ನಿರಂತರವಾಗಿ ಎಚ್ಐವಿ ಪೀಡಿತರ ಸಂಖ್ಯೆ ಏರಿಕೆಯಾಗಿತ್ತಿರುವುದು ಹಲ್ದ್ವಾನಿ ಜೈಲಿನಲ್ಲಿ ಆತಂಕ ಮೂಡಿಸಿದೆ. ಈವರೆಗೂ ಮಾಡಿಸಿರುವ ಪರೀಕ್ಷೆಯ ಪ್ರಕಾರ ಹಲ್ದ್ವಾನಿಯ ಜೈಲಿನಲ್ಲಿ 54 ಖೈದಿಗಳಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್ಐವಿ) ಇರುವುದು ಪತ್ತೆಯಾಗಿದ್ದು, ಒಬ್ಬ ಮಹಿಳಾ ಖೈದಿ ಕೂಡ ಎಚ್ಐವಿ-ಪಾಸಿಟಿವ್ ಎಂದು ಪತ್ತೆಯಾಗಿದ್ದಾರೆ ಎಂದು ಸುಶೀಲಾ ತಿವಾರಿ ಆಸ್ಪತ್ರೆಯ ಎಆರ್ಟಿ ಸೆಂಟರ್ ಪ್ರಭಾರಿ ಡಾ.ಪರಮ್ಜಿತ್ ಸಿಂಗ್ ತಿಳಿಸಿದ್ದಾರೆ.
ಕೈದಿಗಳ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಡಾ.ಸಿಂಗ್, “ಎಚ್ಐವಿ ರೋಗಿಗಳಿಗೆ ಎಆರ್ಟಿ (ಆಂಟಿರೆಟ್ರೋವೈರಲ್ ಥೆರಪಿ) ಕೇಂದ್ರವನ್ನು ಸ್ಥಾಪಿಸಲಾಗಿದೆ, ಅಲ್ಲಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ, ನನ್ನ ತಂಡವು ಜೈಲಿನಲ್ಲಿರುವ ಕೈದಿಗಳನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ. ‘ಯಾವ ಖೈದಿ ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೋ ಅವರಿಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್ಎಸಿಒ) ಮಾರ್ಗಸೂಚಿಗಳ ಆಧಾರದ ಮೇಲೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.