ತಿರುಪತಿಗೆ ಹೋಗಿ ಹಿಂತಿರುಗುವ ವೇಳೆ ಕ್ರೂಸರ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಕಂಪ್ಲಿ ಪಟ್ಟಣದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಆಂದ್ರಪ್ರದೇಶದ ವೈಎಸ್ಆರ್ ಜಿಲ್ಲೆಯ ಕೊಂಡಾಪುರ ಮಂಡಲದ ಏಟೂರು ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕ್ರೂಸರ್ನಲ್ಲಿದ್ದ 17ಜನರಲ್ಲಿ ಕಂಪ್ಲಿಯ ಮಹಿಳೆ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಇವರ ಪತ್ನಿ ಲಕ್ಷಿ (40) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.