ಕನಕಪುರದಲ್ಲಿ (Kanakapura) ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ, ವೋಟನ್ನೂ ತಗೋಂಡು ಚುನಾವಣೆ ಗೆಲ್ತೀವಿ ಎಂದು ಸಚಿವ ಅಶ್ವಥ್ ನಾರಾಯಣ (Aswath Narayan) ತಿರುಗೇಟು ನೀಡಿದ್ದಾರೆ.
ʻಬಿಜೆಪಿ ಅಭ್ಯರ್ಥಿಗೆ ಕನಪುರದಲ್ಲಿ ಒಳ್ಳೆಯ ಆಥಿತ್ಯ ಕೊಡ್ತಿವಿʼ ಎಂಬ ಡಿಕೆಶಿ ಹೇಳಿಕೆ ಕುರಿತು ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಥಿತ್ಯವನ್ನೂ ಸ್ವೀಕರಿಸ್ತೀವಿ. ಮಿಲ್ಟ್ರಿ ಹೋಟೆಲ್ (Military Hotels) ಊಟಾನೂ ಮಾಡ್ತೀವಿ, ವೋಟನ್ನೂ ತಗೋಡು ಚುನಾವಣೆಯಲ್ಲೂ ಗೆಲ್ತೀವಿ, ಈ ಬಾರಿ ಜಯಭೇರಿ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.