ಪಕ್ಷಕ್ಕಾಗಿ ದುಡಿದ ನನ್ನ ತಂದೆಯನ್ನು ಬಿಜೆಪಿ ಮರೆತಿದೆ ಎಂದು ದಿವಂಗತ ಅನಂತಕುಮಾರ್ ಪುತ್ರಿ ವಿಜೇತ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ವಿಜೇತ ಅನಂತಕುಮಾರ್, ಬೆಂಗಳೂರು ನಗರದ ಪ್ರಮುಖ ರಸ್ತೆಗಳಿಗೆ, ವೃತ್ತಗಳಿಗೆ ತಂದೆ ಹೆಸರಿಡಲು ಮರೆತ ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆ ಮೂಲಕ ತಂದೆಯ ಕೊಡುಗೆಯನ್ನು ಬಿಜೆಪಿ ಮರೆತಿದೆ ಎಂದು ಕಿಡಿಕಾರಿದ್ದಾರೆ. 1987ಕ್ಕೆ ಅನಂತಕುಮಾರ್ ಬಿಜೆಪಿ ಸೇರಿದ್ದರು. ಅವರು ತಮ್ಮ ಕೊನೆ ಉಸಿರು ಇರುವವರೆಗೆ ಪಕ್ಷಕ್ಕೆ ದುಡಿದಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಹೃದಯದಲ್ಲಿ ತಂದೆ ಜೀವಂತರಾಗಿದ್ದಾರೆ. ಪಕ್ಷಕ್ಕಾಗಿ ದುಡಿದ ತಂದೆಯನ್ನು ಮರೆತ ಬಿಜೆಪಿ ಆತ್ಮಾವಲೋಕನ ಮಾಡಬೇಕಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅನಂತಕುಮಾರ್ ಪುತ್ರಿ ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದು, ತಮ್ಮ ತಂದೆಯ ಕೊಡುಗೆಯನ್ನು ಮರೆಯುತ್ತಿರುವ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕಾರ್ಯಕ್ರಮಗಳಿಗೆ, ರಸ್ತೆಗಳು, ವೃತ್ತಗಳಿಗೆ ತಂದೆ ಹೆಸರನ್ನು ಇಡದೇ ಇರುವ ವಿಚಾರ ಕ್ಷುಲ್ಲಕ ಸಂಗತಿಯಾಗಿದೆ. ನನ್ನ ತಂದೆ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತರಾಗಿದ್ದಾರೆ ಎಂದು ವಿಜೇತ ಅನಂತಕುಮಾರ್ ತಿಳಿಸಿದ್ದಾರೆ.