ಬಿಜೆಪಿ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಔಪಚಾರಿಕವಾಗಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದಾರೆ. ಸುಪ್ರಿಂಕೋರ್ಟ್ನಲ್ಲಿ ವಕೀಲೆಯಾಗಿರುವ ಬಾನ್ಸುರಿ ಅವರಿಗೆ ದಿಲ್ಲಿ ಬಿಜೆಪಿಯ ಕಾನೂನು ಘಟಕದಲ್ಲಿ ಮಹತ್ತರ ಹೊಣೆ ನೀಡಲಾಗಿದೆ. ಈ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಹಿರಿಯ ನಾಯಕಿಯ ಪುತ್ರಿಯನ್ನು ದಿಲ್ಲಿ ಬಿಜೆಪಿಯ ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ಕೂಡ ನೇಮಿಸಲಾಗಿದೆ.
ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ದೇವ್ ಅವರು ಬಾನ್ಸುರಿ ಸ್ವರಾಜ್ ಅವರನ್ನು ಕಾನೂನು ಘಟಕದ ಸಹ ಸಂಚಾಲಕಿಯಾಗಿ ನೇಮಕಗೊಳಿಸಿದ್ದು, ಸ್ವರಾಜ್ ಪುತ್ರಿಯ ಸೇರ್ಪಡೆಯಿಂದ ಬಿಜೆಪಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.