ಸಾಕ್ಷಾತ್ ಶ್ರೀರಾಮುಲು ಈ ಬಾರಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದರೂ ನಾವು ಅವರನ್ನು ಸೋಲಿಸುತ್ತೇವೆ , ಅವರ ಬೆಂಬಲಿತ ಅಭ್ಯರ್ಥಿ ಬಂದರೂ ಕೂಡ ಸೋಲಿಸುತ್ತೇವೆ ಎಂದು ಮೊಳಕಾಲ್ಮೂರಿನ ಬಿಜೆಪಿ ಮುಖಂಡರು ತಮ್ಮ ಆಕ್ರೋಶವನ್ನು ಹೊರಗೆ ಹಾಕಿದ ಘಟನೆ ನಡೆಯಿತು. ಅವರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅವರ ಕಾರ್ಯಕರ್ತರ ಸಭೆಯಲ್ಲಿಮಾತನಾಡಿದರು.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲೆ ಒಳ ಬೇಗುದಿ ಕುದಿಯುತ್ತಿದೆ. ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರಕ್ಕೆ ಕರೆ ತಂದು ಅವರಿಂದ ಕ್ಷೇತ್ರದ ಅಭಿವೃದ್ದಿ ಕಾಣಬೇಕು ಎಂದು ಬಯಸಿ ಇಲ್ಲಿನ ಮುಖಂಡರು ಶ್ರೀರಾಮುಲು ಅವರನ್ನು ಗೆಲ್ಲಿಸಿ ಕಳುಹಿಸಿದ್ದರು. ಆದರೆ ಅವರು ಕ್ಷೇತ್ರದ ಅಭಿವೃದ್ದಿಗೆ ಬದಲಿಗೆ ಸ್ವಜನ ಪಕ್ಷಪಾತವನ್ನು ಮಾಡಿದ್ದಾರೆ. ಮೊಳಕಾಲ್ಮೂರನ್ನು ಬಳ್ಳಾರಿಗೆ ಜೀದಾಳಾಗಿಸಿಕೊಳ್ಳಲು ಹೊರಟಿದ್ದಾರೆ. ಯಾರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್ ನಲ್ಲಿದ್ದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಅವರಿಗೆ ಎರಡು ಕೋಟಿ ಕೊಟ್ಟು ಚುನಾವಣೆಗೆ ನಿಲ್ಲಿಸಲು ಹೊರಟಿದ್ದಾರೆ.