2023ನೇ ಸಾಲಿನಲ್ಲಿ ಭಾರತೀಯ ಉದ್ಯೋಗಿಗಳ ವೇತನದಲ್ಲಿ ಶೇ.10.2ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಅರ್ನ್ಸ್ಟ್ ಹಾಗೂ ಯಂಗ್ (ಇವೈ) ಸಂಸ್ಥೆಯ ‘ಫ್ಯೂಚರ್ ಆಫ್ ಪೇ’ ವರದಿ ತಿಳಿಸಿದೆ. ಆದರೆ, ಈ ಹೆಚ್ಚಳ ಕಳೆದ ಸಾಲಿಗಿಂತ ಕಡಿಮೆ. 2022ರಲ್ಲಿ ವೇತನ ಹೆಚ್ಚಳ ಶೇ.10.4ರಷ್ಟಿತ್ತು. ಬ್ಲೂ ಕಾಲರ್ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಹುದ್ದೆಗಳ ವೇತನ ಹೆಚ್ಚಳದ ಪ್ರಮಾಣ ಕಡಿಮೆಯಿರುವ ನಿರೀಕ್ಷೆಯಿದೆ.
ಇ-ಕಾಮರ್ಸ್, ವೃತ್ತಿ ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನ ವಲಯಗಳು ಈ ವರ್ಷ ಅತ್ಯಧಿಕ ವೇತನ ಹೆಚ್ಚಳವನ್ನು ಕಾಣಲಿವೆ ಎಂದು ವರದಿ ತಿಳಿಸಿದೆ. ಅತ್ಯಧಿಕ ವೇತನ ಹೆಚ್ಚಳವಾಗುವ ಟಾಪ್ ಮೂರು ವಲಯಗಳು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿವೆ. ಇ-ಕಾಮರ್ಸ್ ವಲಯ ಶೇ.12.5ರಷ್ಟು ಅತ್ಯಧಿಕ ವೇತನ ಹೆಚ್ಚಳ ಕಾಣುವ ನಿರೀಕ್ಷೆಯಿದೆ. ಇದರ ಜೊತೆಗೆ ವೃತ್ತಿಪ ಸೇವೆಗಳು ಶೇ.11.9ರಷ್ಟು, ಮಾಹಿತಿ ತಂತ್ರಜ್ಞಾನ ಶೇ.10.8ರಷ್ಟು ವೇತನ ಹೆಚ್ಚಳ ಕಾಣುವ ನಿರೀಕ್ಷೆಯಿದೆ’ ಎಂದು ಈ ವರದಿ ತಿಳಿಸಿದೆ.