ಇ ಸಿಗರೇಟ್ ಸೇದೋದು ಬಹಳ .. ಹೀಗಾಗಿ 2009ರಲ್ಲೇ ಇ ಸಿಗರೇಟ್ ಅನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು.. ಆದ್ರೆ ಇನ್ನೂ ಇ ಸಿಗರೇಟ್ ಮಾರ್ಕೆಟ್ ಬಂದಾಗಿಲ್ಲ.. ಈ ಬಗ್ಗೆ ವಿಶೇಷ ಕಾರ್ಯಚರಣೆ ಮಾಡ್ತಿರೋ ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಇ.ಸಿಗರೇಟ್ ಗೋಡೌನ್ ಮೇಲೆ ದಾಳಿ ನಡೆಸಿ ಬೃಹತ್ ಕಾರ್ಯಾಚರಣೆ ಮಾಡಿದೆ.. ಹೌದು.. ಸಿಗರೇಟ್ ಸೇದೋದು ಡೇಂಜರ್.. ಇ ಸಿಗರೇಟ್ ಇನ್ನೂ ಡೇಂಜರ್.. ಐ ಫೈ ಲೈಫ್, ಪಾರ್ಟಿ ಗೀರ್ಟಿ ಅಂತಾ ಸುತ್ತಾಡೋ ಯುವಕರಿಗೆ ಇ ಸಿಗರೇಟ್ ಹುಚ್ಚು ಹೆಚ್ಚು..
ಇ ಸಿಗರೇಟ್ ಸೇದಿದ್ರೆ ಅಷ್ಟು ಎಫೆಕ್ಟ್ ಇಲ್ಲ ಅನ್ನೋದು ಸೇದೋರ ವಾದ.. ಆದ್ರೆ ಇದ್ರಿಂದ ಬೇಗ ಕ್ಯಾನ್ಸರ್ ಅಟ್ಯಾಕ್ ಆಗುತ್ತೆ ಹೈಲಿ ಡೇಂಜರ್ ಅನ್ನೋದು ಮೆಡಿಕಲ್ ವರದಿ.. ಮೆಡಿಕಲ್ ವರದಿ ಹಿನ್ನೆಲೆ ಕೇಂದ್ರ ಸರ್ಕಾರ 2009ರಲ್ಲೇ ಇ ಸಿಗರೇಟ್ ಬ್ಯಾನ್ ಮಾಡಿತ್ತು.. ಬ್ಯಾನ್ ಮಾಡಿ ಹತ್ತಾರು ವರ್ಷಗಳಾದ್ರೂ ಇನ್ನೂ ಇ ಸಿಗರೇಟ್ ದಂಧೆ ನಿಂತಿಲ್ಲ.. ಇ ಸಿಗರೇಟ್ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಿರೋ ಬೆಂಗಳೂರು ಸಿಟಿ ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಇ ಸಿಗರೇಟ್ ಗೋಡೌನ್ ಮೇಲೆ ದಾಳಿ ನಡೆಸಿ 1ಕೋಟಿ 25ಲಕ್ಷ ಮೌಲ್ಯದ ಇ ಸಿಗರೇಟ್ ವಶಪಡೆದಿದೆ..