ಅಂತರ್ಜಲ ಮಟ್ಟ ಸುಧಾರಿಸಲು ಹಾಗೂ ಜೀವವೈವಿಧ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ 60ಕ್ಕು ಹೆಚ್ಚು ಕೆರೆಗಳನ್ನು ಶಾಸಕ ಹಾಗೂ ಪತಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಿರುವುದು ಬಿಜೆಪಿ ಪಕ್ಷದ ಕಾರ್ಯವೈಖರಿಗೆ ಇಡಿದ ಕನ್ನಡಿಯಾಗಿದೆ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ,ಸಂಜಯ್ ನಗರ,ಗುರುರಾಜ ಲೇಔಟ್, ಆನಂದನಗರ ,ರಾಮಾಂಜನೆಯ ಬಡವಣೆ,ಮಂಜುನಾಥ ನಗರ,ಕಾರ್ತಿಕ ನಗರ ಸೇರಿದಂತೆ ಮಳೆಯ ನಡುವೆಯೂ ನೂರಾರು ಕಾರ್ಯಕರ್ತರ ಜೊತೆಗೆ ಹೆಜ್ಜೆಹಾಕಿದರು.ದೊಡ್ಡನಕ್ಕುಂದಿ ಗ್ರಾಮದ ಮುಖಂಡರಾದ ಶ್ರೀಧರ್ ರೆಡ್ಡಿ, ಮಿಥುನ್ ರೆಡ್ಡಿ,ಹಾಗೂ ಮಾರತ್ತಹಳ್ಳಿ ಪಾಲಿಕೆ ಮಾಜಿ ಸದಸ್ಯ ಟೆಂಟ್ ರಮೇಶ್ ಸಾರಥ್ಯದಲ್ಲಿ ಪ್ರಚಾರದಲ್ಲಿ ಸಾಥ್ ನೀಡಿದರು.