ಬಿಜೆಪಿ ಪ್ರಣಾಳಿಕೆ (BJP Manifesto) ಗಳ ಬಗ್ಗೆ ಕಾಂಗ್ರೆಸ್ (Congress) ನಾಯಕರ ಟೀಕೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ (Sudhakar) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ನ ಗ್ಯಾರಂಟಿಗಳನ್ನ ಮೆಹಂದಿಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನ ಜನ ನಂಬಲು ತಯಾರಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗಾಗಿ ಏನೂ ಮಾಡಲಿಲ್ಲ. ಕೃಷಿ ಸಮ್ಮಾನ್, ಆಯುಷ್ಮಾನ್, ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದು ಯಾರು? ಬಿಜೆಪಿ ಮೇಲೆ ಭರವಸೆ ಇದೆ. ನರೇಂದ್ರ ಮೋದಿ (Narendra Modi) ಯೇ ಜನರಿಗೆ ಭರವಸೆ. ಡಿಕೆಶಿ (DK Shivakumar), ಸಿದ್ದರಾಮಯ್ಯ (Siddaramaiah), ರಾಹುಲ್ ಗಾಂಧಿ (Rahul Gandhi) ಮಾತು ಜನ ಕೇಳೋಕೆ ತಯಾರಿಲ್ಲ ಎಂದರು.