ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರಿಗೆ ಹೊಸ ಇಮೇಜ್ ತಂದು ಕೊಟ್ಟ ಸಿನಿಮಾ ಪೃಥ್ವಿ. ಕೆಂಪು.. ಕೆಂಪು..ಧೂಳು.. ಜೆ,ಸಿ,ಬಿ ಹಾಗೂ ಲಾರಿಗಳ ಓಡಾಟ. ಪೊಲಿಟಿಶಿಯನ್ಸ್ ಗಳ ಪೊಲಿಟಿಕಲ್ ಲೆಕ್ಕಾಚಾರ ಹಾಗೂ ಅವ್ಯವಹಾರ. ಇದ್ರ ನಡುವೆ ಹೋರಾಡುವ ಜಿಲ್ಲಾಧಿಕಾರಿ. ಇವತ್ತಿಗೂ ಪುನೀತ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ಪ್ರಕಾರ ಪೃಥ್ವಿ ಪುನೀತ್ ಅಭಿನಯದ ಓನ್ ಆಫ್ ದಿ ಬೆಸ್ಟ್ ಸಿನಿಮಾ. ಇಂತಹ ಪೃಥ್ವಿಯನ್ನ ಪುನೀತ್ ರಾಜ್ ಕುಮಾರ್ ಅವ್ರ ವೃತ್ತಿ ಬದುಕಿಗೆ ನೀಡಿದ ಖ್ಯಾತಿ ಜೇಕಬ್ ವರ್ಗಿಸ್ ಅವ್ರದ್ದು. ಇವತ್ತಿಗೂ ಜೇಕಬ್ ವರ್ಗಿಸ್ ಹೆಸ್ರು ಕೇಳಿದ ತಕ್ಷಣ ಅನೇಕರು ಪೃಥ್ವಿ ಸಿನಿಮಾ ನಿರ್ದೇಶಕ ಎಂದು ಹೇಳ್ತಾರೆ.. ಗುರುತಿಸುತ್ತಾರೆಯಂದ್ರೇ.. ಪೃಥ್ವಿಯ ಪವರ್ & ಫೀವರ್ ಹೇಗಿತ್ತು ಹಾಗೂ ಹೇಗಿದೆ ಅನ್ನುವದನ್ನ ನೀವೇ ಲೆಕ್ಕ ಹಾಕಿ.
ಆದ್ರೇ ವಿಪರ್ಯಾಸ.. ಪೃಥ್ವಿ ಬಳಿಕ ಪುನೀತ್ ಹಾಗೂ ಜೇಕಬ್ ಒಂದಾಗಲೇ ಇಲ್ಲ. ಮತ್ತೆ ಸಿನಿಮಾ ಮಾಡಲೇ ಇಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪುನೀತ್ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಕಲಾಭಿಮಾನಿಗಳಲ್ಲಿ ಚಿಕ್ಕ ಅಸಮಾಧಾನ ಇದ್ದಿದ್ದು ಸುಳ್ಳಲ್ಲ. ಆದ್ರೇ ಈಗ ಈ ಅಸಮಾಧಾನವೂ ದೂರ ಆಗಲಿದೆ. ಯಾಕಂದ್ರೇ.. ಭರ್ತಿ ಒಂದು ದಶಕದ ಬಳಿಕ ಪುನೀತ್ ರಾಜ್ ಕುಮಾರ್ ಜೇಕಬ್ ವರ್ಗಿಸ್ ಜೊತೆ ಮತ್ತೊಮ್ಮೆ ಸಿನಿಮಾ ಮಾಡಲು ಮುಂದಾಗಿದ್ಧಾರೆ. ವಿಶೇಷ ಅಂದ್ರೇ.. ಪುನೀತ್ ರಾಜ್ ಕುಮಾರ್ ಈ ಬಾರಿ ತಾವೇ ಖುದ್ದು ತಮ್ಮ ಚಿತ್ರಕ್ಕೆ ಬಂಡವಾಳವನ್ನೂ ಹೂಡಲಿದ್ದಾರೆ. ನೆನಪಿರಲಿ.. ಪುನೀತ್ ರಾಜ್ ಕುಮಾರ್ ಇಲ್ಲೀತನ್ಕ ತಮ್ಮ ಪಿ.ಆರ್.ಕೆ. ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಬೇರೇಯವ್ರ ಚಿತ್ರವನ್ನೇ ನಿರ್ಮಿಸಿದ್ದಾರೆ ಹೊರತು ತಮ್ಮ ಚಿತ್ರವನ್ನ ತಾವೇ ಖುದ್ದು ನಿರ್ಮಾಣ ಮಾಡಿರಲಿಲ್ಲ. ನೋ ಡೌಟ್. ಜೇಕಬ್ ವರ್ಗಿಸ್ ಸಿನಿಮಾ ಅಂದ್ಮೇಲೆ ಅದು ವಿಭಿನ್ನವಾಗಿಯೇ ಇರುತ್ತೆ. ವಾಸ್ತವಕ್ಕೆ ಕೈಗನ್ನಡಿಯಾಗಿಯೇ ಇರುತ್ತೆ. ಜೇಕಬ್ ನಿರ್ದೇಶನದ ಹಿಂದಿನ ಚಿತ್ರಗಳೇ ಇದಕ್ಕೆ ಸಾಕ್ಷಿ. ಈ ಕಾರಣದಿಂದಾಗಿಯೇ ಪುನೀತ್ ಅಭಿಮಾನಿಗಳು ಆಗಲೇ ಎಕ್ಸಾಯಟ್ ಆಗಿದ್ದಾರೆ. ಪುನೀತ್ ಜೇಕಬ್ ಕಾಂಬಿನೇಶನ್ ಸಿನಿಮಾ ಹೇಗೆ ಮೂಡಿ ಬರಲಿದೆ. ಈ ಬಾರಿ ಯಾವ ಕಥೆಯನ್ನ ಆಯ್ಕೆ ಮಾಡಿಕೊಂಡಿದ್ಧಾರೆ ಎನ್ನುವ ಕೂತುಹಲದಲ್ಲಿಯೇ ಚಿತ್ರದ ಮುಹೂರ್ತಕ್ಕಾಗಿ ಕಾದು ಕುಂತಿದ್ದಾರೆ. ಆದ್ರೇ ನೆನಪಿರಲಿ ನಿಮಗೆ ಈ ಚಿತ್ರದ ಸಂಪೂರ್ಣ ವಿಚಾರ ಹಾಗೂ ಸಮಾಚಾರ ಸವಿಸ್ತಾರವಾಗಿ ಗೊತ್ತಾಗುವುದು ಮುಂದಿನ ವರ್ಷವೇ. ಹೌದು. ವರ್ಷಕ್ಕೆ ಒಂದೇ ಸಿನಿಮಾ ಎಂಬ ನಿಯಮಕ್ಕೆ ಜೋತು ಬಿದ್ದಿದ್ದ ಪುನೀತ್ ರಾಜ್ ಕುಮಾರ್ ಕೆಲ ದಿನಗಳ ಹಿಂದೆ ಟಾರ್ಗೆಟ್ 3ಯನ್ನ SET ಮಾಡ್ಕೊಂಡಿದ್ದರು. ವರ್ಷಕ್ಕೆ ಮೂರು ಸಿನಿಮಾ ಮಾಡುವ ಮಾತುಗಳನ್ನಾಡಿದ್ದರು.
ಇದಕ್ಕೆ ಪೂರಕವಾಗಿ ಅನೇಕ ಸಿನಿಮಾಗಳನ್ನೂ ಪುನೀತ್ ಒಪ್ಪಿಕೊಂಡಿದ್ದಾರೆ. ಒಪ್ಪಿಕೊಳ್ತಾನೇ ಇದ್ದಾರೆ. ನೀವು ನಂಬ್ತಿರೋ ಬಿಡ್ತಿರೋ ಪುನೀತ್ ಕೈಯಲ್ಲಿ ಸದ್ಯಕ್ಕೆ ಐದು ಸಿನಿಮಾಗಳಿವೆ. ಇದ್ರಲ್ಲಿ ಜೇಮ್ಸ್ ಕೂಡಾ ಒಂದು. ಜೇಮ್ಸ್ ಚಿತ್ರದ ಚಿತ್ರೀಕರಣ ಸದ್ಯಕ್ಕೆ ನಡೆಯುತ್ತಿದೆ. ಇನ್ನೇನೂ ಚಿತ್ರೀಕರಣ ಮುಕ್ತಾಯನೂ ಆಗಲಿದೆ. ಜೇಮ್ಸ್ ಬಳಿಕ ಪುನೀತ್ ಪವನ್ ಕುಮಾರ್ ಅವರ ದ್ವೀತ್ವ ಚಿತ್ರದ ಚಿತ್ರೀಕರಣವನ್ನ ಆರಂಭ ಮಾಡಲಿದ್ದಾರೆ. ದ್ವೀತ್ವದ ಬಳಿಕ ಸರತಿಯಲ್ಲಿ ದಿನಕರ್ ತೂಗುದೀಪ್ ಕೂಡಾ ಇದ್ದಾರೆ. ಸಂತೋಷ್ ಆನಂದ್ ರಾಮ್ ಕೂಡಾ ಇದ್ಧಾರೆ. ಹೆಬ್ಬುಲಿ.. ಪೈಲ್ವಾನ್ ಚಿತ್ರದ ನಿರ್ದೇಶಕ ಕೃಷ್ಣ ಕೂಡಾ ಇದ್ದಾರೆ. ಈಗ ಈ ಸಾಲಿನಲ್ಲೀ ಜೇಕಬ್ ವರ್ಗಿಸ್ ಕೂಡಾ ಬಂದು ಸೇರಿಕೊಂಡಿದ್ಧಾರೆ. ಈ ಕಾರಣಕ್ಕೆ.. ಪುನೀತ್ ದ್ವೀತ್ವ ಬಳಿಕ ಯಾವಾಗ ಯಾವ ಅವತಾರವೆತ್ತಲಿದ್ದಾರೆಯೆನ್ನುವದನ್ನ ಈಗಲೇ ಹೇಳುವುದು ಕಷ್ಟ. ಅಂದ್ಹಾಗೇ ಪುನೀತ್ ಹಾಗೂ ಜೇಕಬ್ ಕಾಂಬಿನೇಶನ್ ನ ಸಿನಿಮಾದ ಕಥೆ ಆಗಲೇ ಲಾಕ್ ಆಗಿದೆ. ಕಥೆ ಕೇಳಿ ಪುನೀತ್ ಮೆಚ್ಚಿಕೊಂಡು ಆಗಿದೆ. ಇನ್ನೇನ್ ಇದ್ರೂ ಚಿತ್ರದ ಮುಹೂರ್ತ ಅಧಿಕೃತವಾಗಿ ಆಗಬೇಕು. ಚಿತ್ರದ ಚಿತ್ರೀಕರಣ ಆರಂಭವಾಗಬೇಕಷ್ಟ